ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, January 8, 2010

ಗದುಗಿನ ಭಾರತ - ಒಂದು ಇ-ಪುಸ್ತಕ ಪ್ರಯತ್ನ

ಸ್ನೇಹಿತರೇ,

ಕನ್ನಡ ಸಾಹಿತ್ಯ ಭಂಡಾರದಲ್ಲಿ ರತ್ನಪ್ರಾಯವಾಗಿರುವ ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಹಂತಹಂತವಾಗಿ ಇಲ್ಲಿ ಪ್ರಕಟಿಸುವುದು, ಕೊನೆಗೆ ಇಡೀ ಗ್ರಂಥವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ.

ಈ ಗ್ರಂಥದ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗಾಗಲೇ ಅಂತರ್ಜಾಲದಲ್ಲಿ ಇದೆಯೋ ಇಲ್ಲವೋ ತಿಳಿಯದು, ಇದ್ದರೆ ಅಂಥ ಮತ್ತೊಂದು ಪ್ರಯತ್ನ ಅವಶ್ಯಕವೇ ಎಂಬ ಪ್ರಶ್ನೆಯೇಳುತ್ತದೆ. ಅವಶ್ಯಕವೆಂದಾದರೂ ಆ ಪ್ರತಿಯಿಂದ ಇಲ್ಲಿಗೆ ಕಾಪಿ ಪೇಸ್ಟ್ ಮಾಡಿಬಿಡಬಹುದಲ್ಲವೇ ಎಂಬ ಉಪಪ್ರಶ್ನೆಯೂ ಏಳುತ್ತದೆ. ಆದರೆ ನಮ್ಮ ಅಂತಿಮ ಉದ್ದೇಶ ಇ-ಪುಸ್ತಕವೊಂದನ್ನು ಹೊರತರುವುದಾದರೂ, ಮೂಲ ಉದ್ದೇಶ ಕೇವಲ ಅದಲ್ಲ. ಇಡೀ ಗದುಗಿನ ಭಾರತವನ್ನು ಓದಬೇಕೆಂಬ ಆಸೆ ನಮ್ಮಲ್ಲಿ ಕೆಲವರಿಗಾದರೂ ಇದ್ದೇ ಇದೆ, ಆದರೆ ಕಾರಣಾಂತರಗಳಿಂದ, ಜೀವನದ ಇತರ ಒತ್ತಡ/ಪ್ರೇರಣೆ/ಒತ್ತಾಯಗಳಿಂದ ಈ ಆಸೆ ಆಸೆಯಾಗೇ ಉಳಿಯುತ್ತದೆಯೇ ಹೊರತು ಅದೊಂದು ಒತ್ತಡವಾಗಿ ಕ್ರಿಯೆಯಾಗಿ ಹೊರಹೊಮ್ಮುವುದೇ ಇಲ್ಲ - ಇಂಥದ್ದೊಂದು ಯೋಜನೆಯ ಒತ್ತಾಸೆ ಇಲ್ಲದಿದ್ದರೆ. ಗದುಗಿನ ಭಾರತವನ್ನು ಟೈಪು ಮಾಡುವ ನೆಪದಲ್ಲಾದರೂ ಅದನ್ನು ಸಂಪೂರ್ಣ ಓದುವ ಅವಕಾಶ ದೊರೆಯುತ್ತದಲ್ಲವೇ, ಇದು ನಮ್ಮ ಮೂಲ ಆಶಯ. ಕಾರಣವೇನೇ ಇರಲಿ, ಒಮ್ಮೆ ಓದಲು ತೊಡಗಿಸಿಕೊಂಡರೆ, ಓದುವ ವೇಗ ಬಂದರೆ, ಕಾವ್ಯ ತನ್ನಿಂದ ತಾನೇ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಎನ್ನುವುದು ನಮ್ಮ ಅನುಭವ, ಕುಮಾರವ್ಯಾಸನ ವಿಷಯದಲ್ಲಂತೂ ಅದು ಹೆಚ್ಚು ಸತ್ಯ. ಜೊತೆಗೆ ಹೀಗೆ ನಮ್ಮದೇ ಒಂದು ಇ-ಆವೃತ್ತಿಯನ್ನು ತಯಾರಿಸಿಕೊಳ್ಳುವುದರ ಮೂಲಕ ಅದರಲ್ಲಿ ಹುಡುಕುವಿಕೆ, ಗುರುತಿಟ್ಟುಕೊಳ್ಳುವಿಕೆ ಇತ್ಯಾದಿ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಬಹುದೇ ಎಂಬ ಆಲೋಚನೆಯೂ ಇದೆ.

ಇಷ್ಟಕ್ಕೂ ಇದೊಂದು ಮಹಾನ್ ಪ್ರಯತ್ನವೆಂಬ ಹಮ್ಮೇನೂ ನಮಗಿಲ್ಲ. ಈ ಇನ್ನೂರು ವರ್ಷಗಳಲ್ಲಿ ಅನೇಕ ವ್ಯಕ್ತಿ-ಸಂಸ್ಥೆಗಳು ಓದುವುದೇ ಕಷ್ಟವಾದ, ವಿವಿಧ ಪಾಠಾಂತರಗಳುಳ್ಳ ತಾಳೆಗರಿಗಳ ಆಕರಗಳಿಂದ ಗದುಗಿನ ಭಾರತವನ್ನು ಸಂಪಾದಿಸುವ/ಸಂಸ್ಕರಿಸುವ/ಪರಿಷ್ಕರಿಸುವ ಮಹತ್ ಕಾರ್ಯಗಳನ್ನೇ ಮಾಡಿದ್ದಾರೆ (ಕಂಪ್ಯೂಟರೆಂಬ ಆಧುನಿಕ ಸಾಧನವಿಲ್ಲದೆಯೂ!). ಆದ್ದರಿಂದ ನಮ್ಮ ಈ ಚಿಕ್ಕ ಪ್ರಯತ್ನದಿಂದ ಕುಮಾರವ್ಯಾಸಭಾರತದ ಬಳಕೆ ಹೆಚ್ಚಿಸಿಕೊಳ್ಳುವುದು ಬಿಟ್ಟರೆ ಹೆಚ್ಚಿನ ಫಲವನ್ನೇನೂ ನಾವು ನಿರೀಕ್ಷಿಸುವುದಿಲ್ಲ.

ಇಡೀ ಜನಪದದ ಮನದಲ್ಲಿ ನಲಿದಾಡುವ ಕೃತಿಯನ್ನು "ಸಂಪಾದಿಸು"ವ ಪ್ರಯತ್ನ ಕೂಡಾ, ಕೇವಲ ಇಬ್ಬರದೇ ಆಗುವ ಬದಲು ಬಹುಜನರ ಪ್ರಯತ್ನವಾದರೆ ಸೊಗಸಲ್ಲವೇ? ಆದ್ದರಿಂದ ಇದು ನಮ್ಮೆಲ್ಲರ ಪ್ರಯತ್ನದ ಫಲವಾಗಲಿ ಎಂದು ನಮ್ಮ ಆಶಯ. ನೀವೂ ಬನ್ನಿ, ಕೈಗೂಡಿಸಿ, ಗದುಗಿನ ಭಾರತದ ಜನಪ್ರಿಯ ಇ-ಆವೃತ್ತಿಯನ್ನು ಸಾಕಾರಗೊಳಿಸಿ.

ಲಭ್ಯವಿರುವ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಭಾಗವಹಿಸುವವರು ತಮಗಿಷ್ಟವಾದ ಪರ್ವವೊಂದನ್ನು ಆರಿಸಿಕೊಂಡು ಅದನ್ನು ಬರಹಕ್ಕಿಳಿಸಲು ಪ್ರಾರಂಭಿಸಬಹುದು. ಒಂದೊಂದು ಸಂಧಿ ಪೂರ್ಣವಾದಾಗಲೂ ನಿರ್ದಿಷ್ಟವಾದ ಪರ್ವದ ಹೆಸರಿನಡಿಯಲ್ಲಿ (ಲೇಬಲ್) ಈ ಬ್ಲಾಗಿನಲ್ಲಿ ಪ್ರಕಟಿಸುತ್ತಾ ಹೋಗಬಹುದು. ಹೀಗೆ ಹತ್ತು ಪರ್ವಗಳೂ ಪೂರ್ಣವಾದಾಗ ಇ-ಪುಸ್ತಕಕ್ಕೆ ಬೇಕಾದ ಸಾಹಿತ್ಯ ಸಿಕ್ಕಂತಾಯಿತು. ಅದನ್ನೆಲ್ಲ ಕ್ರೋಢೀಕರಿಸಿ, ಕರಡು ತಿದ್ದಿ ಪ್ರಕಟಿಸುವ ಕೆಲಸದ ಬಗ್ಗೆ ನಂತರ ಯೋಚಿಸಬಹುದು. ಸಧ್ಯಕ್ಕೆ ಪರ್ವಗಳು, ಸಂಧಿ ಸಂಖ್ಯೆ ಹಾಗೂ ಆ ಪರ್ವಗಳನ್ನು ವಹಿಸಿಕೊಂಡವರ ಪಟ್ಟಿ ಹೀಗಿದೆ:

ಸಂ. /ಪರ್ವ /ಸಂಧಿಗಳು /ವಹಿಸಿಕೊಂಡವರು
೦೧. /ಆದಿಪರ್ವ /೨೦ /ಶ್ರೀಕಾಂತ್ ವೆಂಕಟೇಶ್ (ಆಸಕ್ತರು ಕೈಗೂಡಿಸಬಹುದು)
೦೨. /ಸಭಾಪರ್ವ /೧೬ /ಮಂಜುನಾಥ ಕೊಳ್ಳೇಗಾಲ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೩. /ಅರಣ್ಯಪರ್ವ /೨೩ /ಹೊಳೆನರಸಿಪುರ ಮಂಜುನಾಥ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೪. /ವಿರಾಟಪರ್ವ /೧೦ /ಸುನಾಥ್ ಮತ್ತು ಜ್ಯೋತಿ ಮಹದೇವ್ (ಪೂರ್ಣಗೊಂಡಿದೆ)
೦೫. /ಉದ್ಯೋಗಪರ್ವ/೧೧ /ಹನ್ಸಿಕಾ ಪ್ರಿಯದರ್ಶಿನಿ (ಆಸಕ್ತರು ಕೈಗೂಡಿಸಬಹುದು)
೦೬. /ಭೀಷ್ಮಪರ್ವ /೧೦ /ಆನಂದ (ಆಸಕ್ತರು ಕೈಗೂಡಿಸಬಹುದು)
೦೭. /ದ್ರೋಣಪರ್ವ /೧೯ /ಸತ್ಯನಾರಾಯಣ
೦೮. /ಕರ್ಣಪರ್ವ /೨೭ /ಸುಪ್ತದೀಪ್ತಿ ಮತ್ತು ಸುಬ್ರಮಣ್ಯ (ಶಂಭುಲಿಂಗ)
೦೯. /ಶಲ್ಯಪರ್ವ /೩ /ಪಾರ್ಥಸಾರಥಿ
೧೦./ ಗದಾಪರ್ವ /೧೩ /ಸಂತೋಷ್ ಮೂಗೂರ್ ಮತ್ತು ರಶ್ಮಿ ಮೂಗೂರ್

ಸಧ್ಯಕ್ಕೆ ಮೇಲಿನ ಎಲ್ಲ ಪರ್ವಗಳ ಸಂಗ್ರಹಣಕಾರ್ಯ ಚಾಲ್ತಿಯಲ್ಲಿದೆಯಾದರೂ ಕೆಲವು ಪರ್ವಗಳು ಹಿಂದುಳಿದಿವೆ. ಆಸಕ್ತರು ಕೈಗೂಡಿಸಬಹುದು. ಹಾಗೆಯೇ ಅನೇಕ ಪರ್ವಗಳು/ಸಂಧಿಗಳು ಕರಡು ತಿದ್ದುವಿಕೆಗೆ ಕಾದಿವೆ. ಅವುಗಳನ್ನು ಆಗಿಂದಾಗ್ಗೆ ಗ್ರೂಪ್ ಮೈಲ್ ನಲ್ಲಿ ಪ್ರಕಟಿಸುತ್ತೇವೆ. ಆಸಕ್ತರು ಕರಡು ತಿದ್ದುವಿಕೆಗೆ ಮುಂದಾಗುವುದಾದರೆ ಸಂಗ್ರಹಣೆ ಮತ್ತಷ್ಟು ಚುರುಕುಗೊಳ್ಳುತ್ತದೆ. ಆಸಕ್ತರು ದಯವಿಟ್ಟು ಇಲ್ಲಿ ಕಾಮೆಂಟ್ ಹಾಕಿರಿ, ನಿಮ್ಮ email ವಿಳಾಸ ಮತ್ತು ತಾವು ಹಂಚಿಕೊಳ್ಳಲಿಚ್ಛಿಸುವ ಪರ್ವವನ್ನು ಸೂಚಿಸಿ.


ಇವೆಲ್ಲದರ ಅಂತಿಮ ಉದ್ದೇಶ, ಕುಮಾರವ್ಯಾಸಭಾರತದ ಸಮಗ್ರ ಮಾಹಿತಿ ಒಂದೆಡೆಯಲ್ಲಿ ದೊರೆಯುವಂತೆ ಮಾಡುವುದು. ಯೋಜನೆಯ ಈ ಪ್ರಾಥಮಿಕ ಹಂತದಲ್ಲಿ ಅದರ ತಾಂತ್ರಿಕತೆಯನ್ನೂ ಒಳಗೊಂಡಂತೆ ವಿವಿಧ ಆಯಾಮಗಳನ್ನು ಚರ್ಚಿಸುವುದು, ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯ. ಮೊದಲೇ ಹೇಳಿದಂತೆ ಇದು ಒಂದು ಇಡೀ ತಂಡದ ಕೆಲಸ. ಆದ್ದರಿಂದ ನಾವೆಲ್ಲರೂ ಸರಾಗವಾಗಿ ಚರ್ಚಿಸಲು/ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಅನುವಾಗುವಂತೆ ಅನುವಾಗುವಂತೆ ಒಂದು google group ಸೃಷ್ಟಿಸಿದ್ದೇವೆ. ಅದು ಇಲ್ಲಿದೆ:

http://groups.google.com/group/gaduginabharata

ದಯವಿಟ್ಟು ಈ-ಗುಂಪಿಗೆ ಸೇರಿ. ನಿಮ್ಮ ಸಕ್ರಿಯ ಭಾಗವಹಿಸುವಿಕೆ ಯೋಜನೆಯ ಯಶಸ್ಸಿಗೆ ಅತ್ಯಗತ್ಯ.

62 comments:

Rashmi Prasad said...
This comment has been removed by the author.
Rashmi Prasad said...

Sir am interested in the project. My email Id is bhongalerashmi@gmail.com

gadugina bharata said...

ರಶ್ಮಿಯವರೇ, ಧನ್ಯವಾದಗಳು. ನೀವು ತಿಳಿಸಿದಂತೆ ಶಲ್ಯಪರ್ವವನ್ನು ನೀವು ಕೈಗೆತ್ತಿಕೊಳ್ಳಬಹುದು. ಒಂದು ಸಂಧಿ ಮುಗಿದ ಮೇಲೆ ದಯವಿಟ್ಟು ತಿಳಿಸಿ, ಬ್ಲಾಗಿನಲ್ಲಿ ಪ್ರಕಟಿಸಲು authorship ಕೊಡುತ್ತೇವೆ.

ಈ ಪ್ರಯತ್ನ ತಮಗೆ ಖುಶಿ ಕೊಡುತ್ತದೆಂದು ತಿಳಿದಿದ್ದೇವೆ.

sunaath said...

ಮಾನ್ಯರೆ,
ವಿರಾಟಪರ್ವವನ್ನು ನಾನು ವಹಿಸಿಕೊಳ್ಳಲು ಇಚ್ಛಿಸುತ್ತೇನೆ.
ನನ್ನ ಇ-ಮೇಲ್ ID:
sunaath@gmail.com

gadugina bharata said...

ಪ್ರಿಯ ಸುನಾಥ್,

ಆಸಕ್ತಿವಹಿಸಿದ್ದಕ್ಕೆ ಧನ್ಯವಾದಗಳು. ಒಂದು ಸಂಧಿ ಮುಗಿದಕೂಡಲೆ ತಿಳಿಸಿ, ಬ್ಲಾಗ್ ಬರಹಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಡುತ್ತೇವೆ. ಕಥಾಮಂಜರಿಯನ್ನು ಬರೆದೋದುವ ಈ ಕೆಲಸ ತಮಗೆ ಖುಷಿ ತರುತ್ತದೆಂದು ನಂಬಿದ್ದೇವೆ.

Hansika said...

ಮಾನ್ಯರೆ,

ಉದ್ಯೊಗ ಪರ್ವ ನನ್ನ ಪಾಲಿಗಿರಲಿ. ನನ್ನ ಈ_ಅಂಚೆ hansika.priyadarshini@gmail.com

- ಹನ್ಸಿಕಾ

gadugina bharata said...

ಪ್ರಿಯ ಹನ್ಸಿಕಾ,

ಧನ್ಯವಾದಗಳು. ಈ ಉದ್ಯೋಗವನ್ನು ತಾವು ಆನಂದಿಸುತ್ತೀರೆಂದು ಆಶಿಸುತ್ತೇವೆ. ಮೊದಲ ಸಂಧಿ ಮುಗಿದ ನಂತರದ ನಿಮ್ಮ ಇ-ಮೈಲ್ ಗೆ ಕಾಯುತ್ತಿದ್ದೇವೆ. All the best.

ಆನಂದ said...

ಭೀಷ್ಮ ಪರ್ವ ನನಗಿರಲಿ.
ನನ್ನ ಇ-ಮೇಲ್ aananda.kl@gmail.com

gadugina bharata said...

ಪ್ರಿಯ ಆನಂದ್,

ಧನ್ಯವಾದಗಳು. ಭೀಷ್ಮಪರ್ವ ತಮಗೆ. For the purpose of uniformity, ದಯವಿಟ್ಟು ಬರಹ ಪ್ಯಾಡ್ ಉಪಯೋಗಿಸಿ. Templateಅನ್ನು ಈಮೈಲ್ ಮೂಲಕ ಕಳುಹಿಸಿದ್ದೇನೆ. ಮೊದಲ ಸಂಧಿ ಮುಗಿದ ನಂತರದ ನಿಮ್ಮ ಇ-ಮೈಲ್ ಗೆ ಕಾಯುತ್ತಿದ್ದೇವೆ. All the best.

Santhosh Mugoor (ಸಂk) said...

ಗದಾಪರ್ವವನ್ನು ನಾನು ಮತ್ತು ನನ್ನ ತಂಗಿ ರಶ್ಮಿ ಇಬ್ಬರು ಕೂಡಿ ಟೈಪಿಸುತ್ತೇವೆ.

ನನ್ನ ವಿಂಚೆ : santhosh.mugoor@gmail.com

gadugina bharata said...

ಪ್ರಿಯ ಸಂತೋಷ್ ಮತ್ತು ರಶ್ಮಿ,

ಧನ್ಯವಾದಗಳು. Templateಅನ್ನು ಈಮೈಲ್ ಮೂಲಕ ಕಳುಹಿಸಿದ್ದೇನೆ. ಮೊದಲ ಸಂಧಿ ಮುಗಿದ ನಂತರದ ನಿಮ್ಮ ಇ-ಮೈಲ್ ಗೆ ಕಾಯುತ್ತಿದ್ದೇವೆ. ಗದಾಪರ್ವದ ಓದು/ಬರಹ ತಮಗೆ ಸಂತಸ ಕೊಡಲಿ. ತಮ್ಮಿಬ್ಬರಿಗೂ ಶುಭಾಶಯಗಳು.

manju said...

ಅರಣ್ಯ ಪರ್ವ ನನಗಿರಲಿ, ನಿಮ್ಮ ಜೊತೆ ನಾನೂ ಕೈ ಜೋಡಿಸುತ್ತೇನೆ. ನನ್ನ ಇಮೇಲ್ - manju787@gmail.com

gadugina bharata said...

ಪ್ರಿಯ ಮಂಜುನಾಥ್,

ತಮ್ಮ ಆಸಕ್ತಿಗೆ ಧನ್ಯವಾದಗಳು. ನೀವೀಗ ಅರಣ್ಯಪರ್ವದ ಸಂಗ್ರಹಣೆಗೆ ತೊಡಗಬಹುದು. Templateಅನ್ನು ಈಮೈಲ್ ಮೂಲಕ ಕಳುಹಿಸುತ್ತಿದ್ದೇವೆ. ಮೊದಲ ಸಂಧಿ ಮುಗಿದ ನಂತರದ ನಿಮ್ಮ ಇ-ಮೈಲ್ ಗೆ ಕಾಯುವೆವು. All the best.

ಸುಪ್ತದೀಪ್ತಿ suptadeepti said...

ನಮಸ್ಕಾರ. ಇಂಥ ಬೃಹತ್ಕಾರ್ಯಕ್ಕೆ ಕೈ ಹಾಕಿದ್ದಕ್ಕೆ ಅಭಿನಂದನೆಗಳು, ಶುಭಾಶಯಗಳು.
ಕರ್ಣನನ್ನು ನಾನೆತ್ತಿಕೊಳ್ಳಬಹುದೆ?
suptadeepti@gmail.com

ವಂದನೆಗಳೊಂದಿಗೆ,
ಸುಪ್ತದೀಪ್ತಿ.

hamsanandi said...

ನಮಸ್ಕಾರ. ಇಂತಹ ಒಳ್ಳೆ ಪ್ರಯತ್ನ ಮೊದಲಾಗಿಸಿದ್ದಕ್ಕೆ ಅಭಿನಂದನೆ. ನನ್ನ ಕೈಲಾದದ್ದನ್ನು ಮಾಡುವ ಹಂಬಲವಿದೆ.

Sandeepa said...

ಇನ್ನು ಯಾವ ಭಾಗ ಉಳಿದಿದೆಯೆಂದು ದಯವಿಟ್ಟು ತಿಳಿಸಿ. ನನಗೆ ಮನಸ್ಸಿದೆ.

Sathya said...

ನಾನು ಬಹಳ ದಿವಸದಿಂದ ಗದುಗಿನ ಭಾರತವನ್ನು ಓದುತ್ತಿದ್ದೇನೆ,ಒಂದು ಕಾಲದಲ್ಲಿ (ಸುಮಾರು ೫ ~೬ ವರ್ಷಗಳ ಕೆಳಗೆ, ಇದೇ ಗದುಗಿನ ಭಾರತಕ್ಕಾಗಿ ಅಂತರ್ ಜಾಲವನ್ನೆಲ್ಲಾ ಜಲಾಡಿದಾಗ ಸಿಕ್ಕಿದ್ದು ಬರೆ ಪೀಠೀಕಾ ಸಂಧಿಯ ಒಂದು ಪದ್ಯ, ತುಂಬಾ ನಿರಾಸೆಯಗಿತ್ತು, ಯಾರಾದರು ಈ ಪ್ರಯತ್ನ ಮಾಡಬಾರದೇಕೆ ಅನ್ನಿಸಿತ್ತು, ಈ ದಿನ ಇನಿರೀಕ್ಷಿತವಾಗಿ ನಿಮ್ಮ ಬ್ಲಾಗ್ ಸಿಕ್ಕಿತು, ತುಂಬಾ ದನ್ಯವಾದಗಳು. ೦೭. /ದ್ರೋಣಪರ್ವ /೧೯ - ಯಾರು ಪ್ರಾರಂಬಿಸಿರದಿದ್ದಲ್ಲಿ ನಾನು ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ, ನನ್ನ ಬಳಿ ಕುವೆಂಪು ಸಂಪದಿತ ಕರ್ನಾಟಕ ಕಥಾಮಂಜರಿ ಇದೆ. ದಯಮಾಡಿ ತಿಳಿಸಿ.

ತಮ್ಮ ವಿಶ್ವಾಸಿ.
ಸತ್ಯನಾರಾಯಣ.

gadugina bharata said...

ನಮಸ್ಕಾರ ಸುಪ್ತದೀಪ್ತಿ. ಕರ್ಣಶಿಶು ರಾಧೆಗಾಗಿ ಬಹುದಿನದಿಂದ ಕಾಯುತ್ತಿತ್ತು. ಖಂಡಿತಾ ಕೈಗೆತ್ತಿಕೊಳ್ಳಿ.

ಟೈಪಿಸಲು ದಯವಿಟ್ಟು unicode ಉಪಯೋಗಿಸಿ. barahapadನಲ್ಲಿ ಕಳುಹಿಸಿದರೆ ಅನುಕೂಲ. ತಮ್ಮ ಈಮೈಲ್ ಗೆ template ಕಳುಹಿಸುತ್ತೇವೆ. All the best.

gadugina bharata said...

ನಮಸ್ಕಾರ ಸತ್ಯನಾರಾಯಣ ಅವರೇ, ನಮ್ಮ ಅನಿಸಿಕೆಯೂ ಅದೇ ಆಗಿತ್ತು. ಆ ಅರಿಕೆಯ ಫಲವೇ ಈ ಯೋಜನೆ. ದ್ರೋಣಪರ್ವವನ್ನು ತಾವು ಕೈಗೆತ್ತಿಕೊಳ್ಳಬಹುದು. ತಮ್ಮ ಈಮೈಲ್ ಕಳುಹಿಸಿದರೆ ಸಂಗ್ರಹಣಕ್ಕೆ ನಾವೆಲ್ಲರೂ common ಆಗಿ ಬಳಸುತ್ತಿರುವ template ಕಳುಹಿಸುತ್ತೇವೆ.

ಟೈಪಿಸಲು ದಯವಿಟ್ಟು unicode ಉಪಯೋಗಿಸಿ. barahapad ಆದರೆ ಅನುಕೂಲ.

Sathya said...

ನನ್ನ ಈ ಮೈಲ್ satyathehumble@gmail.com, ನಾನು BharahaIME ಉಪಯೋಗಿಸಿತ್ತಿದ್ದೇನೆ.ದಯವಿಟ್ಟು template ಕಳಿಸಿ.

gadugina bharata said...

ನಮಸ್ಕಾರ ಹಂಸಾನಂದಿ ಮತ್ತು ಸಂದೀಪ್

ದಯವಿಟ್ಟು ಭಾಗವಹಿಸಿ. ತಮ್ಮ ಕೊಡುಗೆ ಅತ್ಯಗತ್ಯ. ಮಂಜರಿಯ ಹತ್ತು ಪರ್ವಗಳಲ್ಲಿ ಗದಾಪರ್ವವನ್ನು ಬಿಟ್ಟು ಉಳಿದೆಲ್ಲ ಪರ್ವಗಳನ್ನು ಸಧ್ಯಕ್ಕೆ ಒಬ್ಬೊಬ್ಬರೇ ಸಂಗ್ರಹಿಸುತ್ತಿದ್ದಾರೆ. ನಾವು ಅವುಗಳನ್ನು ಹಂಚಿಕೊಂಡು ಸಂಗ್ರಹಣೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು. ಅಲ್ಲದೇ ಮುಂದುವರೆದು ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ತಮ್ಮ ಆಸಕ್ತಿ ತಿಳಿಸಿ.

ಗದುಗಿನ ಭಾರತ google group ಸೇರಿರಿ.

http://groups.google.com/group/gaduginabharata

nagaraja rao said...

ಮಾನ್ಯರೇ,
ನಮಸ್ಕಾರಗಳು.
ನಾನು ಕನ್ನಡ ಪ್ರಾಧ್ಯಾಪಕನಾಗಿ ಈಗ ನಿವೃತ್ತನಾಗಿದ್ದು, ನಿಮ್ಮ ಕೆಲಸದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ. ಬೆರಳಚ್ಚು ಕೆಲಸ ಮಾಡಬಲ್ಲೆ. ಹೇಗೆ ಮಾಡಬೇಕೆಂದು ತಿಳಿಸಿದರೆ ನಾನು ಭಾಗಿಯಾಗಬಯಸುವೆ. ನನ್ನ ಈಮೇಲ್ :nrjavali.gmail.com. ಧನ್ಯವಾದಗಳೊಂದಿಗೆ.
ನಿಮ್ಮ
ಜವಳಿ.

Dr U B Pavanaja said...

ದಯವಿಟ್ಟು ಇದನ್ನು ನೋಡಿ

-ಪವನಜ

gadugina bharata said...

ಪವನಜರೇ, ಚೊಕ್ಕವಾದ ಬರಹಕ್ಕೆ ಧನ್ಯವಾದಗಳು.

S.B.Raju said...

ಮಾನ್ಯರೇ,
ನಮಸ್ಕಾರಗಳು.
ನಿಮ್ಮ ಕೆಲಸದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ. ಬೆರಳಚ್ಚು ಕೆಲಸ ಮಾಡಬಲ್ಲೆ. ಹೇಗೆ ಮಾಡಬೇಕೆಂದು ತಿಳಿಸಿದರೆ ನಾನು ಭಾಗಿಯಾಗಬಯಸುವೆ. ನನ್ನ ಈಮೇಲ್ :sbraaju@rediffmail.com. ಧನ್ಯವಾದಗಳೊಂದಿಗೆ.

shyamala sharma said...

ಮಾನ್ಯರೇ,
ನಮಸ್ಕಾರಗಳು.
ನಿಮ್ಮ ಕೆಲಸದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ.ಬೆರಳಚ್ಚು ಕೆಲಸ ಮಾಡಬಲ್ಲೆ. ಹೇಗೆ ಮಾಡಬೇಕೆಂದು ತಿಳಿಸಿದರೆ ನಾನು ಭಾಗಿಯಾಗಬಯಸುವೆ. ನನ್ನ ಈಮೇಲ್ address chinnoorossy_brs@yahoo.com

gadugina bharata said...

ನಮಸ್ಕಾರ ರಾಜು ಮತ್ತು ಶ್ಯಾಮಲ ಅವರೇ,

ದಯವಿಟ್ಟು ಭಾಗವಹಿಸಿ. ತಮ್ಮ ಕೊಡುಗೆ ಅತ್ಯಗತ್ಯ. ಮಂಜರಿಯ ಹತ್ತು ಪರ್ವಗಳಲ್ಲಿ ಗದಾಪರ್ವವನ್ನು ಬಿಟ್ಟು ಉಳಿದೆಲ್ಲ ಪರ್ವಗಳನ್ನು ಸಧ್ಯಕ್ಕೆ ಒಬ್ಬೊಬ್ಬರೇ ಸಂಗ್ರಹಿಸುತ್ತಿದ್ದಾರೆ. ನಾವು ಅವುಗಳನ್ನು ಹಂಚಿಕೊಂಡು ಸಂಗ್ರಹಣೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು. ಅಲ್ಲದೇ ಮುಂದುವರೆದು ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿ

shyamala sharma said...

ªÀiÁ£ÀågÉ £ÀªÀĸÁÌgÀ,
¸ÀAUÀæºÀuÉAiÀiÁzÀgÀÆ ¸ÀjAiÉÄ CxÀªÁ PÀgÀqÀÄ wzÀÄݪÀÅzÁzÀgÀÆ ¸ÀjAiÉÄÃ. vÀvïPÀët ªÀiÁqÀ®Ä ¹zÀݪÁVzÉÝãÉ. ¸ÀAUÀæºÀuÉ JAzÀgÉ £ÁªÉà ¥ÀŸÀÛPÀ¢AzÀ ¸ÀAUÀ滹 PÀ¼ÀÄ»¸À¨ÉÃPÉ. PÀgÀqÀÄ wzÀÄݪÀÅzÀÄ JAzÀgÉ ºÉÃUÉ JA§ ¸ÀÆZÀ£ÉUÀ¼ÉÆA¢UÉ zÀAiÀÄ«lÄÖ DzÉò¹
±ÁåªÀÄ®

gadugina bharata said...

ಶ್ಯಾಮಲ ಅವರೇ, ನಿಮ್ಮ ಕಾಮೆಂಟ್ ಓದಲಾಗುತ್ತಿಲ್ಲ. ದಯವಿಟ್ಟು unicode ಬಳಸಿ ಮರುಪ್ರಕಟಿಸಿ

gadugina bharata said...

ಶ್ಯಾಮಲ ಅವರೆ,

ತಮ್ಮ ಕಾಮೆಂಟನ್ನು convert ಮಾಡಿ ಇಲ್ಲಿ ಹಾಕಿದ್ದೇನೆ:

"ಮಾನ್ಯರೆ ನಮಸ್ಕಾರ,

ಸಂಗ್ರಹಣೆಯಾದರೂ ಸರಿಯೆ ಅಥವಾ ಕರಡು ತಿದ್ದುವುದಾದರೂ ಸರಿಯೇ. ತತ್‌ಕ್ಷಣ ಮಾಡಲು ಸಿದ್ದವಾಗಿದ್ದೇನೆ. ಸಂಗ್ರಹಣೆ ಎಂದರೆ ನಾವೇ ಪುಸ್ತಕದಿಂದ ಸಂಗ್ರಹಿಸಿ ಕಳುಹಿಸಬೇಕೆ. ಕರಡು ತಿದ್ದುವುದು ಎಂದರೆ ಹೇಗೆ ಎಂಬ ಸೂಚನೆಗಳೊಂದಿಗೆ ದಯವಿಟ್ಟು ಆದೇಶಿಸಿ

ಶ್ಯಾಮಲ"

ಹೌದು, ಸಂಗ್ರಹಣೆಯೆಂದರೆ ಲಭ್ಯವಿರುವ ಕರ್ಣಾಟ ಭಾರತ ಕಥಾಮಂಜರಿಯ ಜನಪ್ರಿಯ ಆವೃತ್ತಿ (ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ)ಯಿಂದ ಆಯ್ದ ಪರ್ವವನ್ನು ಬೆರಳಚ್ಚಿಸಿ gaduginabharata@googlegroups.com ವಿಳಾಸಕ್ಕೆ ಕರಡು ತಿದ್ದುವಿಕೆಗಾಗಿ ಕಳಿಸುವುದು.

ಕರಡುತಿದ್ದುವಿಕೆಯೆಂದರೆ, ಈಗಾಗಲೇ ಬಂದಿರುವ ಸಂಧಿಗಳನ್ನು ಪರಿಶೀಲಿಸಿ ತಪ್ಪಿದ್ದರೆ ತಿದ್ದಿ ಬರೆಯುವುದು. ಹಾಗೆ ತಿದ್ದಿದ ಪ್ರತಿಯನ್ನು ಮತ್ತೆ ಮೇಲಿನ ಈ-ವಿಳಾಸಕ್ಕೇ ಪ್ರಕಟನೆಗಗಾಗಿ ಕಳಿಸುವುದು

ಹೆಚ್ಚಿನ ವಿವರಗಳಿಗಾಗಿ http://groups.google.com/group/gaduginabharata/browse_thread/thread/d646bc292cbad843# ಇಲ್ಲಿ ನೋಡಿ.

ಈಗಾಗಲೇ ಸಾಕಷ್ಟು ಸದಸ್ಯರು ಸಂಗ್ರಹಣಕಾರ್ಯದಲ್ಲಿ ತೊಡಗಿದ್ದಾರಾದ್ದರಿಂದ ಸಧ್ಯಕ್ಕೆ ಕರಡು ತಿದ್ದುವಿಕೆಗಾಗಿ ಸಾಕಷ್ಟು ಬರಹಗಳು ಕಾಯುತ್ತಿವೆ. ಸಧ್ಯಕ್ಕೆ ಕರಡು ತಿದ್ದುವಿಕೆಗಾಗಿ ಕಾಯುತ್ತಿರುವ ಬರಹಗಳು ಇವು:

ಆದಿಪರ್ವ - ಎರಡನೆಯ ಸಂಧಿ: http://groups.google.com/group/gaduginabharata/browse_thread/thread/dd607ab88e3cf8b5#

ದ್ರೋಣಪರ್ವ - ಎರಡನೆಯ ಸಂಧಿ: http://groups.google.com/group/gaduginabharata/browse_thread/thread/f0df0910c314104c#

ವಿರಾಟಪರ್ವ - ನಾಲ್ಕನೆಯ ಸಂಧಿ: http://groups.google.com/group/gaduginabharata/browse_thread/thread/e16b6ff7de8828aa#

ಅರಣ್ಯಪರ್ವ - ನಾಲ್ಕನೆಯ ಸಂಧಿ:
http://groups.google.com/group/gaduginabharata/browse_thread/thread/2a83778dacd0be26#

ಕರಡು ತಿದ್ದುವವರು ತಿದ್ದಿದ ಪ್ರತಿಯೊಂದಿಗೆ ಆಯಾಯ threadಗೆ ಉತ್ತರಿಸಿದರೆ ಸಾಕು. ನಾವು ತಿದ್ದಿದ ಪ್ರತಿಯನ್ನೊಮ್ಮೆ ತಾಂತ್ರಿಕವಾಗಿ ಮರುಪರಿಶೀಲಿಸಿ ಪ್ರಕಟಿಸುತ್ತೇವೆ.

Subrahmanya said...

ನೀವು ಹೇಳಿದ ಪರ್ವವನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ.
ನನ್ನ e-mail ವಿಳಾಸ.
subrahmanyahs@gmail.com...
ದಯಮಾಡಿ ತಮ್ಮ ಆದೇಶವನ್ನು ತಿಳಿಸಿ.
ನೀರಿಕ್ಷೆಯಲ್ಲಿ....ಸುಬ್ರಹ್ಮಣ್ಯ

gadugina bharata said...

ಸುಬ್ರಮಣ್ಯ ಭಟ್ಟರೆ,

ತಮ್ಮ ಉತ್ಸಾಹಕ್ಕೆ ಋಣಿ. ಇರುವ ಹತ್ತು ಪರ್ವಗಳಲ್ಲಿ ಯಾವುದಾದರೊಂದನ್ನು ತಾವು ಆರಿಸಿಕೊಳ್ಳಬಹುದು. ಸಧ್ಯಕ್ಕೆ ಒಬ್ಬೊಬ್ಬರು ಒಂದೊಂದು ಪರ್ವದಂತೆ ಹತ್ತು ಜನ ವಹಿಸಿಕೊಂಡಿದ್ದೇವೆ, ಆದರೆ ಸಮಯದ ಅಭಾವದ ಕಾರ‍ಣ ಕೆಲವು ಪರ್ವಗಳು ಹಿಂದುಳಿದಿವೆ.

ಉದಾಹರಣೆಗೆ ಸಭಾಪರ್ವ, ಮತ್ತು ಉದ್ಯೋಗಪರ್ವ ಗಳು ಸಾಕಷ್ಟೇ ಹಿಂದಿವೆ. ಕರ್ಣ ಮತ್ತು ಶಲ್ಯಪರ್ವಗಳು ಇನ್ನೂ ಪ್ರಾರಂಭವಾಗಿಲ್ಲ. ತಾವು ಅವುಗಳಲ್ಲೊಂದನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ ನೋಡಿ. ತಮ್ಮ ಆಯ್ಕೆ ತಿಳಿಸಿದರೆ ಸಾಹಿತ್ಯ ಸಂಗ್ರಹಣೆಯ ನಮೂನೆಯನ್ನು ಕಳುಹಿಸುತ್ತೇನೆ.

ಕೇವಲ ಸಾಹಿತ್ಯ ಸಂಗ್ರಹಣೆಯಲ್ಲದೇ ಕರಡು ತಿದ್ದುವಿಕೆ, ಗಮಕವಾಚನ, ವ್ಯಾಖ್ಯಾನ, software & database design ಇತ್ಯಾದಿ ಅನೇಕ ಚಟುವಟಿಕೆಗಳಿವೆ. ತಮ್ಮ ಆಸಕ್ತಿಯಿರುವ ಕ್ಷೇತ್ರದಲ್ಲಿ ಭಾಗವಹಿಸಬಹುದು. ದಯವಿಟ್ಟು ನನ್ನ ಜೀ-ಮೈಲ್ ksmanjunatha@gmail.com ತಮ್ಮ gtalk ಗೆ ಸೇರಿಸಿಕೊಳ್ಳಿ. ತಮಗೆ ಸಮಯ ಸಿಕ್ಕಾಗ ಚರ್ಚಿಸೋಣ

ವಂದನೆಗಳು

sskasha said...

ನನ್ನ ಹೆಸರು ಸಂತೋಷ್ ಕುಮಾರ್, ಬೆಂಗಳೂರಿನಿಂದ. ಇಂದು ಅನಿರೀಕ್ಷಿತವಾಗಿ ಈ ಬ್ಲಾಗನ್ನು ನೋಡಿದೆ. ನಾನು ಕೂಡಾ ಈ ಮಹಾನ್ ಕಾರ್ಯದಲ್ಲಿ ಕೈ ಜೋಡಿಸಬೇಕೆಂದಿರುವೆ. ಆದರೆ ನಾನು ಯಾವ ಕೆಲಸವನ್ನು ಮಾಡಬಹುದು ಎಂದು ತಿಳಿಯುತ್ತಿಲ್ಲ. ಯಾವುದಾದರು ಯಾರಾದರೂ ಮಾಡದೆ ಬಿಟ್ಟ ಕಾರ್ಯ ಇದ್ದರೆ ತಿಳಿಸಿ. ಇದು ನನ್ನ ಮೇಲ್ ಐಡಿ sskasha@gmail.com

gadugina bharata said...

ನಮಸ್ಕಾರ ಸಂತೋಷ್ ಅವರೇ,

ದಯವಿಟ್ಟು ಭಾಗವಹಿಸಿ. ತಮ್ಮ ಕೊಡುಗೆ ಅತ್ಯಗತ್ಯ. ಮಂಜರಿಯ ಹತ್ತು ಪರ್ವಗಳನ್ನೂ ತಂಡದ ಸದಸ್ಯರು ಆರಿಸಿಕೊಂಡಿದ್ದಾರೆ, ಆದರೆ ಕೆಲವು ಪರ್ವಗಳು ಹಿಂದುಳಿದಿವೆ. ನಾವು ಅವುಗಳನ್ನು ಹಂಚಿಕೊಂಡು ಸಂಗ್ರಹಣೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು. ಅಲ್ಲದೇ ಮುಂದುವರೆದು ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿ

Dr Madhusudhan joshi said...

nannalli prati labhyavilla addarinda karadu tidduva kelasaviddare dayavittu vahisi hege mada bekembudannu tilisi nanu blogige nanna abhiprayagalannaa hege hanchikollabahudu embudannu tilisi

gadugina bharata said...

ಜೋಷಿಯವರೇ, ತಮ್ಮ ಆಸಕ್ತಿಗೆ ಧನ್ಯವಾದಗಳು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಣೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಸಿಗುತ್ತದೆ ಎಂದು ಕೇಳಿದ್ದೇನೆ.

ತಾವು ಕರಡು ತಿದ್ದುವ ಕಾರ್ಯದಲ್ಲಿ ಅಗತ್ಯವಾಗಿ ಭಾಗವಹಿಸಬಹುದು. ನಿಜ ಹೇಳಬೇಕೆಂದರೆ ಸಧ್ಯಕ್ಕೆ ಆ ಕಾರ್ಯ ಸಾಕಷ್ಟೇ ಹಿಂದುಳಿದಿದೆ. ತಮಗೆ ಸಮಯವಾದಾಗ ನನ್ನನ್ನು ksmanjunatha@gmail.com ನಲ್ಲಿ ಜಿ.ಟಾಕ್ ನಲ್ಲಿ ಸಂಪರ್ಕಿಸಬಹುದು.

ದಯವಿಟ್ಟು ನಮ್ಮ ಈ-ಗ್ರೂಪ್ ಸೇರಿರಿ.

ಆದೇಶ್ ಕುಮಾರ್ ಸಿ ಟಿ - Adesh Kumar C T said...

ಸರ್ ನನ್ನ ಹೆಸರು ಆದೇಶ್,
ನನ್ನ ಬಳಿ ಗದುಗಿನ ಭಾರತದ ಪ್ರತಿಯು ಲಭ್ಯವಿಲ್ಲ. ಆದರೆ ನಿಮ್ಮಲ್ಲಿ ನಾನು ಒಬ್ಬನಾಗಬೇಕೆಂಬ ಆಸೆ ನನ್ನದು. ಆದ್ದರಿಂದ ತಾವು ನನಗೆ ಕರಡು ತಿದ್ದುವಿಕೆಯೋ ಅಥವ ಬೇರಿನ್ಯಾವುದೇ ಕೆಲಸವನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.

Unknown said...

Dear sir i am intrest in this project,if u give a chance,me also work with you.I m interest in KARNA PARVA.

gadugina bharata said...

ಪ್ರಿಯ ಆದೇಶ್,

ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗವಹಿಸಿ. ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿ

gadugina bharata said...

ಪ್ರಿಯ ಅಮೋಲ್,

ತಮ್ಮ ಆಸಕ್ತಿಗೆ ಧನ್ಯವಾದ. ದಯವಿಟ್ಟು ಭಾಗವಹಿಸಿ. ತಮ್ಮ ಕೊಡುಗೆ ಅತ್ಯಗತ್ಯ. ಕರ್ಣಪರ್ವವನ್ನು ಈಗಾಗಲೇ ಸುಬ್ರಹ್ಮಣ್ಯ ಭಟ್ಟರು ಸಂಗ್ರಹಿಸುತ್ತಿದ್ದಾರೆ. ಆದರೆ ಅವರು ಈಗಾಗಲೇ ಮತ್ತೆರಡು ಪರ್ವದ ಕರಡುತಿದ್ದುವಿಕೆಯನ್ನೂ ವಹಿಸಿಕೊಂಡಿರುವುದರಿಂದ ಅವರಿಗೆ ನಿಮ್ಮ ಸಹಾಯ ಅಗತ್ಯವೇನೋ. ತಾವು ಅವರೊಡನೆ ಮಾತಾಡಿ ಆ ಕಾರ್ಯವನ್ನು ಹಂಚಿಕೊಳ್ಳಬಹುದು. ಅಥವಾ ನೀವು ಇಷ್ಟಪಟ್ಟರೆ ಶಲ್ಯಪರ್ವವನ್ನು ಸಂಪಾದಿಸಬಹುದು. ಅಲ್ಲದೇ ಮುಂದುವರೆದು ಯೋಜನೆಯಲ್ಲಿ ಬಹಳಷ್ಟೇ ತಾಂತ್ರಿಕ, ಸಾಹಿತ್ಯಕ, ಸಾಂಗೀತಿಕ ಅಗತ್ಯಗಳಿವೆ. ಸಧ್ಯಕ್ಕಂತೂ ಕರಡು ತಿದ್ದುವ ಅಗತ್ಯವೂ ಇದೆ. ತಮ್ಮ ಆಸಕ್ತಿ ತಿಳಿಸಿ.

http://groups.google.com/group/gaduginabharata ಸೇರಿರಿ

ಆದೇಶ್ ಕುಮಾರ್ ಸಿ ಟಿ - Adesh Kumar C T said...

ಬಾಸ್, ನನಗೆ ಕರಡು ತಿದ್ದುವಿಕೆಯಲ್ಲಿ ಆಸಕ್ತಿ ಇದೆ. ತಾವು ನನಗೆ ಆ ಕೆಲಸವನ್ನು ವಹಿಸಿದರೆ ನಾನು ಮಾಡಲು ಸಿದ್ದ. ಹಾಗಯೇ ನಾನು ಗಣಕ ತಂತ್ರಜ್ನಾನ ವಿಧ್ಯಾರ್ಥಿಯಾದ್ದರಿಂದ ತಾಂತ್ರಿಕವಾಗಿಯೂ ಭಾಗಿಯಾಗಲೂ ನಾನು ಇಚ್ಚಿಸುತ್ತೇನೆ.
ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.

Unknown said...

o k sir naanu SHALYA PARVA DA SAMPADANE MADUTTENE.

ಪುರುಷೋತ್ತಮ ಬಿಳಿಮಲೆ said...

Great plan, equally great work!

makara said...

ಕರ್ಣಾಟ ಭಾರತ ಕಥಾಮಂಜರಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಹೊಣೆಯನ್ನು ಕೈಗೆತ್ತಿಕೊಂಡಿರುವ ತಮ್ಮ ಬಳಗಕ್ಕೆ ನನ್ನ ನಮಸ್ಕಾರಗಳು. ಇದರಿಂದ ನಮ್ಮಂಥಹ ಹೊರನಾಡ ಕನ್ನಡಿಗರಿಗೆ ಅದನ್ನು ಓದುವ ಸೌಭಾಗ್ಯ ದೊರಕುತ್ತದೆ. ಸಂಪಾದನೆಯ ಜೊತೆಯಲ್ಲಿಯೇ ಅದಕ್ಕೆ ಅವಶ್ಯವಿದ್ದೆಡೆ ಸರಳ ಕನ್ನಡದಲ್ಲಿ ಅರ್ಥವನ್ನು ಬರೆದರೆ ಹೆಚ್ಚು ಉಪಯುಕ್ತವೆನಿಸುತ್ತದೆ.

Karthik Kamanna said...

ಈವರೆಗೆ ಈ ಪುಟವನ್ನು ನಾನು ನೋಡೇ ಇರ್ಲಿಲ್ಲ. ನನ್ನ ಅಳಿಲು ಸೇವೆ ಹೇಗೆ ಮಾಡೋದು ತಿಳಿಸಿ ಸುನಾಥ ಸರ್?

Anonymous said...

ಬಹಳ ಒಳ್ಳೆಯ ಕೆಲಸ.
ಆದರೆ ಒಂದು ಸಣ್ಣ ಸಂಶಯ: ಕೀಲಿಮಣೆ ಕುಟ್ಟಿ ನಕಲು ಮಾಡುವ ಬದಲು, ಸ್ಕ್ಯಾನ್ನರ್ ಉಪಯೋಗಿಸಿದರೆ ಬಹಳಷ್ಟು ಸಮಯ, ಶ್ರಮಗಳು ಉಳಿಯುವವಲ್ಲಾ?

ಇದರಿಂದ ಉಳಿಯುವ ಸಮಯವನ್ನು ಈ ಗ್ರಂಥದ ಹೊಸಗನ್ನಡ ರೂಪದಲ್ಲಿ ಅರ್ಥವಿವರಣೆ, ವಿಮರ್ಶೆ ಇತ್ಯಾದಿಗಳಿಗೆ ವಿನಿಯೋಗಿಸಿದರೆ ನನ್ನಂಥ ಮಂದಮತಿಯವರ ರಸಾಸ್ವಾದನೆಗೆ ಅನುಕೂಲ.

-- ಶ್ರೀ ಕಾರ್

Dr U B Pavanaja said...

ಸ್ಕ್ಯಾನ್ ಮಾಡಿದರೆ ಚಿತ್ರ ರೂಪದಲ್ಲಿ ಬರುತ್ತದೆ, ಪಠ್ಯರೂಪದಲ್ಲಲ್ಲ. ಅದರಿಂದ ದೊಡ್ಡ ಉಪಯೋಗವೇನೂ ಇಲ್ಲ.

Shree Kar said...

http://sanskritdocuments.org/scannedbooks/

ಸ್ಕ್ಯಾನ್ ಮಾಡಿದ ಚಿತ್ರರೂಪವನ್ನು ಪಟ್ಯರೂಪಕ್ಕೆ ಮಾರ್ಪಡಿಸುವ OCR ತಂತ್ರಾಂಶಗಳು ಲಭ್ಯ ಎಂದು ನನ್ನ ತಿಳುವಳಿಕೆ. ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇನೆ.

ಅರವತ್ತರ ದಶಕದಲ್ಲಿ, ನನ್ನ ಎಳವೆಯಲ್ಲಿ ದಾವಣಗೆರೆಯ ಶ್ರೀ ರಾಮ ಮಂದಿರದಲ್ಲಿ ಸುಪ್ರಸಿದ್ಧ ಗಮಕಿ ಭಾರತ ಬಿಂದೂರಾವ್ ಅವರ ಭಾರತವಾಚನ ಕೇಳಿದ್ದೆ.

ಇಂತಹ ಆಡಿಯೋಗಳನ್ನೂ ಇಲ್ಲಿ ಹಾಕಬಹುದು.

Dr U B Pavanaja said...

OCRಗಳು ಕನ್ನಡಕ್ಕೆ ಇನ್ನೂ ಪರಿಪೂರ್ಣವಾಗಿ ತಯಾರಾಗಿಲ್ಲ

Manjunatha Kollegala said...

ಶ್ರೀಕರ ಹಾಗು ಪವನಜ ಅವರೇ,

ಕಾರಣಾಂತರಗಳಿಂದ ತುಸು ಹಿಂದೆ ಸರಿದಿರುವ ಈ ಯೋಜನೆಯಬಗ್ಗೆ ಹೊಸದೊಂದು ಚರ್ಚೆಯನ್ನು ಆರಂಭಿಸುವ ಮೂಲಕ ಆಸಕ್ತಿ ತೋರಿಸಿದ್ದೀರಿ, ಧನ್ಯವಾದಗಳು.

ಗ್ರಂಥವನ್ನು ಸ್ಕ್ಯಾನ್ ಮಾಡುವುದು, OCR ತಂತ್ರಾಂಶಗಳಿಂದ ಬಿಂಬವನ್ನು ಅಕ್ಷರವಾಗಿ ಬದಲಿಸುವುದು ಮತ್ತಿನ್ನೂ ಅನೇಕ ಸೌಲಭ್ಯಗಳಿವೆ, ಹೌದು. ಈ ಸೌಲಭ್ಯಗಳನ್ನು ಬಳಸಿಕೊಂಡು ಕುಮಾರವ್ಯಾಸನನ್ನೂ ಒಳಗೊಂಡಂತೆ ಅನೇಕ ಕನ್ನಡ ಕಾವ್ಯಗಳು ಈಗಾಗಲೇ ಅಂತರ್ಜಾಲದಲ್ಲಿ ಲಭ್ಯವಿವೆ ಎನ್ನುವುದೂ ನಿಜ (ನಾವು ಈ ಯೋಜನೆಯನ್ನು ಆರಂಭಿಸಿದಂದಿನಿಂದ ಇಂದಿನ ವರೆಗೆ ಈ ದಿಕ್ಕಿನಲ್ಲಿ ಅಂತರ್ಜಾಲದಲ್ಲಿ ಭಾರೀ ಬೆಳವಣಿಗೆಗಳೇ ಆಗಿವೆಯೆಂಬುದನ್ನು ನಾವು ಬಲ್ಲೆವು). ಆದರೆ ನಾವು ಈಗಾಗಲೇ ಸ್ಪಷ್ಟಪಡಿಸಿದಂತೆ, ನಮ್ಮ ಉದ್ದೇಶ ಕೇವಲ ಗದುಗಿನ ಭಾರತವನ್ನು ಅಂತರ್ಜಾಲಕ್ಕೆ ಅಳವಡಿಸುವುದಷ್ಟೇ ಅಲ್ಲ. ಆ ಕೆಲಸ ಆಸಕ್ತರ ವೈಯಕ್ತಿಕ ಪ್ರಯತ್ನದಿಂದ ಆಗಬೇಕು, ಇದರಲ್ಲಿ ಹೆಚ್ಚು ಹೆಚ್ಚು ಜನ ಭಾಗವಹಿಸಿ ಕೃತಿಯನ್ನು ಬರೆದು, ಓದಿ, ಕರಡು ತಿದ್ದುವ ನೆಪದಿಂದ ಈ ಕೃತಿಯ ವಿವಿಧ ಭಾಗಗಳನ್ನು ಓದಿ ಆನಂದಿಸುವಂತಾಗಬೇಕು ಎಂಬುದು ನಮ್ಮ ಆಶಯ. ಒಮ್ಮೆ ಅಂತರ್ಜಾಲಕ್ಕೆ ಬೇಗ ತಂದುಬಿಟ್ಟರೆ ಹೆಚ್ಚು ಜನ ಓದುವುದಿಲ್ಲವೇ ಎನ್ನಬಹುದು. ಈಗಾಗಲೇ ಅವು ಅಂತರ್ಜಾಲದಲ್ಲಿ ಲಭ್ಯವಿದೆಯಲ್ಲ! ನಮ್ಮಲ್ಲಿ ಅನೇಕರ ಸಮಸ್ಯೆಯೆಂದರೆ, ಗ್ರಂಥವನ್ನು ಸಂಗ್ರಹಿಸಿಟ್ಟುಕೊಳ್ಳುವಲ್ಲಿನ ಉತ್ಸಾಹ ಅದನ್ನು ತೆರೆದು ಓದುವುದರಲ್ಲಿ ಉಳಿಯುವುದಿಲ್ಲ. ನಮ್ಮ ವೇಗದ ಜೀವನಶೈಲಿಯೂ ಇದಕ್ಕೆ ಕಾರಣವಿರಬಹುದು. ಆದ್ದರಿಂದ ಇಂಥದ್ದೊಂದು ಯೋಜನೆಯಿದ್ದರೆ, ಅದನ್ನು ಆಗಮಾಡಿಸುವ ನೆಪದಲ್ಲಾದರೂ ನಿಜಕ್ಕೂ ಓದುವ ಅವಕಾಶ ಸಿಕ್ಕುತ್ತದಲ್ಲ! ಹಾಗೆ ಒಮ್ಮೆ ತೊಡಗಿಸಿಕೊಂಡರೆ ಕಾವ್ಯ ನಮ್ಮನ್ನು ಬಿಡುವುದಿಲ್ಲ ಎಂಬ ವೈಯಕ್ತಿಕ ನಂಬಿಕೆ ನನ್ನದು. ಜೊತೆಗೆ ಇಷ್ಟು ಜನ ಜೊತೆಗೂಡಿ ಜನಪ್ರಿಯ ಕವಿಯೊಬ್ಬನನನ್ನು ಅಂತರ್ಜಾಲಕ್ಕೆ ತಂದ ಸಣ್ಣ ಖುಶಿ ಕೂಡ ಉಳಿಯುವುದಲ್ಲವೇ? ಈ ಯೋಜನೆಯ ಹಿಂದಿನ ಉದ್ದೇಶ ಇದು. ಇದರ by-product ಆಗಿ ಕೃತಿಯ ಅಂತರ್ಜಾಲ ರೂಪ ಹೊರಬರುವುದಷ್ಟೇ ಹೊರತು ಅದೇ ಮುಖ್ಯ ಉದ್ದೇಶವಲ್ಲ. ಸ್ಕ್ಯಾನರ್ ಉಪಯೋಗಿಸಿದರೆ ಬಹಳಷ್ಟು ಶ್ರಮ/ಸಮಯ ಉಳಿಯುವುದೇನೋ ಹೌದು, ಆದರೆ ಆ ಶ್ರಮದ ಹಿಂದಿನ ಆನಂದ ಮಾಯವಾಗುತ್ತದಲ್ಲ! ಜನ ಈ ’ಶ್ರಮ’ ವಹಿಸುವುದಕ್ಕೆ ಇಷ್ಟು ಸಂಖ್ಯೆಯಲ್ಲಿ ಮುಂದೆ ಬಂದಿರುವುದೇ ಈ ಶ್ರಮದ ಹಿಂದಿನ ಆನಂದಕ್ಕೆ ಸಾಕ್ಷಿ ಅಲ್ಲವೇ?

ಸಂ.ಗೋ.ಬಿಂದೂರಾಯರ ಗಮಕವಾಚನ ಕೇಳಿದ ಪುಣ್ಯವಂತರು ತಾವೆಂದು ತಿಳಿದು ಸಂತಸವಾಯಿತು. ಅಂತಹ ಅಪರೂಪದ ಆಡಿಯೋಗಳು ತಮ್ಮಲ್ಲಿದ್ದರೆ ದಯವಿಟ್ಟು ಹಂಚಿಕೊಳ್ಳಿ.

Ramakant Hegde said...

ಮಿತ್ರರೇ,
ಇಂಥ ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ್ಮೆಲ್ಲರಿಗೂ ಕನ್ನಡ ಬ್ಲಾಗ್ ಓದುಗರು ಚಿರಋಣಿ ಎಂಬ ಮಾತು ನಿಸ್ಸಂಶಯದ್ದು.
ತಮ್ಮ ಪ್ರಯತ್ನ ಬೇಗ ಪೂರ್ತಿಯಾಗಿ, ಬೇಗ ಮುಗಿದರೆ ತಮಗೂ ಕೃತಾರ್ಥ ಭಾವನೆ, ಓದುಗರಿಗೂ ತುಂಬಾ ಸಂತೊಷ.
ಮುಗಿಸುವೆಡೆಗೆ ಕೈ ಜೋಡಿಸಲು - ನಾನಂತೂ ನನ್ನ ಅಳಿಲಸೇವೆಗೆ ಸಿದ್ಧ.
ಹೇಗೆ ಮುಂದುವರೆಸಬಹುದು, ಹಾಗೂ ಹೇಗೆ ಮುಗಿಸಬಹುದು ಎಂಬುದನ್ನು ಈತನಕ ಮುಂದಾದ ತಾವೇ ನಿರ್ಧರಿಸುವದು ಅತಿ ಸೂಕ್ತ.
ಇಂದಿನ ತಾಂತ್ರಿಕ ಬೆಳವಣಿಗೆಗಳನ್ನು (OCR ಇತ್ಯಾದಿ) ಇನ್ನುಳಿದ ಈ ಕೆಲಸದಲ್ಲಿ ಹೇಗೆ ಸಮರ್ಪಕವಾಗಿ ಅಳವಡಿಸಿಕೊಳ್ಳಬಹುದೆಂದು ತಾವೇ ಆರಿಸಿಕೊಳ್ಳಬೇಕು.
ಆನಂತರ ದಯವಿಟ್ಟು ಅ) ಮುಗಿದ ಕೆಲಸಗಳ ಹಾಗೂ ಬ) ಉಳಿದ ಕೆಲಸಗಳ ಯಾದಿಯನ್ನು ಈ ಪೀಠಿಕೆಯಲ್ಲೇ ಪ್ರಕಟಿಸಿರೆಂದು ಕೋರಿಕೆ.
ಅದನ್ನು ನೋಡಿದ ನಂತರ ನನ್ನಂತೆ ಇನ್ನೂ ಹಲವರು ಮುಂದೆ ಬಂದು ಕೈ ಜೋಡಿಸಬಹುದೇನೋ.
ಹಾಗೆಯೇ ಉಳಿದ ಕೆಲಸಗಳ ಪೈಕಿ ನನಗೆ ಏನನ್ನು ವಹಿಸಬಹುದೆಂಬದನ್ನೂ ನನಗೆ ತಿಳಿಸಿ.
(ತಂತ್ರಾಂಶ ಹಾಗೂ ಕನ್ನಡ ಭಾಷೆ ಎರಡರಲ್ಲೂ ನಾನು ತುಂಬಾ ಪರಿಣತ ಎಂದೇನೂ ನನಗೆ ಅನಿಸುವದಿಲ್ಲ!)
ತಮ್ಮವನೇ
- ರಮಾಕಾಂತ ಹೆಗಡೆ, ಕುವೈಟ್.
rasugama1@gmail.com
೦೦೯೬೫-೬೬೨೦೯೧೫೭

Darthy said...

Aatmeeyare,

This is an extremely pleasing project. My familiarity with Baraha is very limited. Nevertheless, I believe I could make an attempt and my skills should improve within a short while. Perhaps, I could join hands with Srikanth Venkatesh who is working on the Adi Parva.

In the meanwhile, I would like to involve myself in proof-reading task. My mail id is geedee.murthy@gmail.com. Please let me know how this could be taken forward.

Thanks and regards.

G Dakshina Murthy
99004 20525

Darthy said...

Aatmeeyare,

This is an extremely pleasing project. My familiarity with Baraha is very limited. Nevertheless, I believe I could make an attempt and my skills should improve within a short while. Perhaps, I could join hands with Srikanth Venkatesh who is working on the Peetika Sandhi.

In the meanwhile, I would like to involve myself in proof-reading task. My mail id is geedee.murthy@gmail.com. Please let me know how this could be taken forward.

Thanks and regards.

G Dakshina Murthy
99004 20525

raghurama bhat said...

ಸನ್ಮಾನ್ಯರೇ,
ವ೦ದನೆಗಳು.ಆಕಸ್ಮಿಕವಾಗಿ ಈ ಬ್ಲಾಗನ್ನು ನೋಡಿದೆ. ಕುಶಿಯಾಯಿತು.ಈ ಸತ್ಕಾರ್ಯದಲ್ಲಿ ಭಾಗವಹಿಸಬೇಕೆ೦ಬ ಅಭಿಲಾಷೆ ಇದೆ.ಆದರೆ ಸದ್ಯ ನಾನು ವಿದೇಶದಲ್ಲಿರುವುದರಿ೦ದ ಈ ಕಾಯಕದಲ್ಲಿ ಕೈಗೂಡಿಸುವುದು ಹೇಗೆ? ಸಪ್ಟ೦ಬರ್ ತಿ೦ಗಳ ಮಧ್ಯದಲ್ಲಿ ಊರಿಗೆ ಹಿ೦ದಿರುಗುವವನಿದ್ದೇನೆ.ಆ ಬಳಿಕ ನೀವು ಬಯಸಿದರೆ ಈ ಸತ್ಕಾರ್ಯದಲ್ಲಿ ಯಥಾಶಕ್ತಿ ಅಳಿಲಸೇವೆ ಮಾಡಲು ಉತ್ಸುಕನಾಗಿದ್ದೇನೆ.ಕನ್ನಡ ಪ್ರಾಧ್ಯಾಪಕನಾಗಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು,ಇದೀಗ ವಿಶ್ರಾ೦ತ ಜೀವನವನ್ನು ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಹಳ್ಳಿಯೊ೦ದರ ಸಾಗಿಸುತ್ತಿದ್ದೇನೆ.ಕುಮಾರವ್ಯಾಸಭಾರತದಲ್ಲಿ ನೀವು ಸೂಚಿಸಿದ ಯಾವುದೇ ಪರ್ವ ಯಾ ಸ೦ಧಿಯನ್ನು ಪ್ರತಿಮಾಡುವುದಾಗಲೀ ಯಾ ಕರಡು ಪ್ರತಿಯನ್ನು ತಿದ್ದುವುದಾಗಲೀ..... ನನ್ನ ಕೈಲಾದ ಸಹಾಯ ಮಾಡಬಹುದು.ಕರ್ಣಾಟ ಭಾರತ ಕಥಾಮ೦ಜರಿಯಲ್ಲಿ ಅನೇಕ ಅನ್ಯದೇಶೀಯ ಪದಗಳು ಅದರಲ್ಲೂ ಮುಖ್ಯವಾಗಿ ಮರಾಠಿ ಭಾಷೆಯ ಪದಗಳು ಸೇರಿಕೊ೦ಡಿವೆ.ದೇಸಿಯ ಸೊಗಡು ಅಧಿಕವಾಗಿರುವ ಗ್ರ೦ಥವದು.ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಗ್ರ೦ಥಾ೦ತ್ಯದಲ್ಲಿ ಕುಮಾರವ್ಯಾಸನ ವಿಶಿಷ್ಟಪದಪ್ರಯೋಗಗಳಿಗೆ ಒ೦ದು ಪದಕೋಶ(ಅ೦ಥ ಪದಗಳ ಅರ್ಥವನ್ನು ನೀಡುವ ಕಾರ್ಯ)ವನ್ನು ಒದಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಧಾರವಾಡ ಆಕಾಶವಾಣಿ ನಿಲಯದಲ್ಲಿ ಬಹುಕಾಲ ಸೇವೆಸಲ್ಲಿಸಿದ ಹೆಸರಾ೦ತ ಸಾಹಿತಿ ದಿವ೦ಗತ ಎನ್.ಕೆ.ಅವರು ಬರೆದ ಕುಮಾರವ್ಯಾಸ ನಿಘ೦ಟು ಎನ್ನುವ ಕೃತಿಯ ಸಹಾಯ ಪಡೆಯಬಹುದು.ನಿಮ್ಮ ಈ ಯೋಜನೆಯಲ್ಲಿ ಇ೦ಥ ಒ೦ದು ಉಪಯುಕ್ತ ಕೆಲಸವನ್ನು ಮಾಡಿದರೆ ಕ೦ನಡ ಸಾಹಿತ್ಯಾಸಕ್ತ ಓದುಗವೃ೦ದಕ್ಕೆ ಸಹಕಾರಿಯಾಗವುದಕ್ಕೆ ಸ೦ದೇಹವಿಲ್ಲ.ಅದೇನೇ ಇರಲಿ ನನ್ನ ಕಡೆಯಿ೦ದ ಯಾವರೀತಿಯ ಸೇವೆಯನ್ನು ತಾವು ನಿರೀಕ್ಷಿಸುವಿರೆ೦ಬುದನ್ನುತಿಳಿಯಲಪೇಕ್ಷಿಸುತ್ತೇನೆ. ಯಾವುದಕ್ಕೂ ಉತ್ತರಿಸಿ.ನನ್ನ ಇ-ಮೈಲ್ ಐ.ಡಿ.k.raghuram.bhat@gmail.com
ಇತಿ ವಿಶ್ವಾಸಪೂರ್ವಕ ವ೦ದನೆಗಳೊ೦ದಿಗೆ,
ಕೆ.ರಘುರಾಮ ಭಟ್,ಉಡುಪುಮೂಲೆ,

Unknown said...

ಗದುಗಿನ ಭಾರತ

Unknown said...

ಗದುಗಿನ ಭಾರತ

Unknown said...

ಗದುಗಿನ ಭಾರತ

raghurama bhat said...

ಮಾನ್ಯರೇ,
ವ೦ದನೆಗಳು.ಈ ಹಿ೦ದೆ ನಿಮಗೆ ತಿಳಿಸಿದ೦ತೆ ಈ ತಿ೦ಗಳಾ೦ತ್ಯದಲ್ಲಿ ನನ್ನ ಹುಟ್ಟೂರಿಗೆ ವಾಪಾಸಾಗುತ್ತಿದ್ದು,ಆ ಬಳಿಕ ನಿಮ್ಮ ಸತ್ಕಾರ್ಯದಲ್ಲಿ ನಾನು ಹೇಗೆ ಸಹಕರಿಸಬಹುದೆ೦ಬುದರ ಕುರಿತು ವಿವರವಾಗಿ ಮಾಹಿತಿ ನೀಡಿದಲ್ಲಿ,ಸ೦ತೋಷದಿ೦ದ ಭಾಗವಹಿಸಲು ಉತ್ಸುಕನಾಗಿದ್ದೇನೆ.ದಯವಿತ್ತು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಲು ಆದಷ್ಟು ಬೇಗನೆ ನನ್ನ ಇ-ಮೈಲ್ ವಿಳಾಸಕ್ಕೆ ಉತ್ತರಿಸುವಿರಾಗಿ ನ೦ಬುತ್ತೇನೆ.ಉತ್ತರದ ನಿರೀಕ್ಷೆಯಲ್ಲಿ ವ೦ದನೆಗಳೊ೦ದಿಗೆ ಸದ್ಯ ವಿರಾಮ.

ಹಯಸುತಾನುದಾಸ said...

i would like join,
mail id: shrinayak97@gmail.com
Shrikanth nayak

ಭೂಮಿ-ಸಾಗರ said...

Please let me know if I can assist in typing and help the e-book project. I will be very glad to do.

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ said...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Anonymous said...

Jaya Kannada